ಜೀವಕೋಷ್ಟಕ -
ಒಂದು ಕಾಲದ ಮರಣ ಪರಿಸ್ಥಿತಿಯ ಸಾರಾಂಶ ಚಿತ್ರ (ಲೈಫ್ ಟೇಬಲ್). ವಾಸ್ತವವಾಗಿ ಆರಂಭದಲ್ಲಿ ಮರಣಕೋಷ್ಟಕವೇ (ಡೆತ್ ಟೇಬಲ್) ಬಳಕೆಗೆ ಬಂದದ್ದು; ಮುಂದೆ ಇದಕ್ಕೇ ಜೀವಕೋಷ್ಟಕ ಎಂದು ಹೆಸರು ರೂಢಿಗೆ ಬಂತು. ಇಂಥ ಒಂದು ಮರಣಕೋಷ್ಟಕದ ಕಲ್ಪನೆಯನ್ನು ರೂಪಿಸಿದ ಕೀರ್ತಿ ಇಂಗ್ಲೆಂಡಿನ ಜಾನ್ ಗ್ರಾಂಟನದು. ಆತ ಲಂಡನ್ನಿನ ಮರಣ ಬಿಲ್ಲುಗಳ (ಬಿಲ್ಸ್ ಆಫ್ ಮಾರ್ಟಾಲಿಟಿ) ಆಧಾರದ ಮೇಲೆ 1661ರಲ್ಲಿ ಮರಣಕೋಷ್ಟಕಗಳನ್ನು ನಿರ್ಮಿಸಿದ. ಮೂರನೆಯ ಶತಮಾನದಷ್ಟು ಹಿಂದೆಯೇ ರೋಮಿನ ಮಾಸೆರ್ ಮತ್ತು ಉಲ್ಪಿಯನ್ ಎಂಬವರು ಜೀವಪ್ರತೀಕ್ಷೆಯನ್ನು (ಎಕ್ಸ್‍ಪೆಕ್ಟೇಷನ್ ಆಫ್ ಲೈಫ್) ಅಂದಾಜು ಮಾಡಿದ್ದರು. ಉಲ್ಪಿಯನ್ನನ ಕೋಷ್ಟಕವನ್ನೇ 18ನೆಯ ಶತಮಾನದವರೆಗೆ ಇಟಲಿಯಲ್ಲಿ ಉಪಯೋಗಿಸುತ್ತಿದ್ದರು. ಗ್ರಾಂಟನದು ಅಭಿಜಾತ (ಕ್ಲ್ಯಾಸಿಕಲ್) ಕಾರ್ಯ. ಆತನ ಸಮಕಾಲಿನನಾದ ಹ್ಯಾಲಿ ಮಾತ್ರ ಈ ಸಂಶೋಧನೆಯ ಮಹತ್ವವನ್ನು ಅರಿತಿದ್ದ. ಈತ ಜರ್ಮನಿಯ ಬ್ರೆಸ್ಲಾವ್ ನಗರದಲ್ಲಿ 1687-91ರ ಅವಧಿಯ ಮರಣದಾಖಲೆಗಳಿಂದ ಗ್ರಾಂಟನ ರೀತಿಯಲ್ಲಿ ಮರಣಕೋಷ್ಟಕವನ್ನು ನಿರ್ಮಿಸಿದ (1693). 1771ರಲ್ಲಿ ಇಂಗ್ಲೆಂಡಿನ ನಾಥ್ರ್ಯಾಂಪ್ಪನ್ ಪಟ್ಟಣದ ಮರಣಕೋಷ್ಟಕಗಳನ್ನು ರಿಚರ್ಡ್ ಪ್ರೆಸ್ ಸಿದ್ಧಪಡಿಸಿದ. ಅಮೆರಿಕದಲ್ಲಿ ಬಾರ್ಟನ್ 1782ರಲ್ಲಿಯೂ ಮುಂದೆ ಫಿಲಡೆಲ್ಪಿಯಾದ ಮರಣಗಳ ಅಧಾರದ ಮೇಲೆ ಅಸಂಪೂರ್ಣ ಮರಣಕೋಷ್ಟಕವೊಂದನ್ನು 1788-90ರಲ್ಲಿಯೂ ಪ್ರಕಟಿಸಿದ. ಈ ಮರಣಕೋಷ್ಟಕಗಳಿಗೆ ಕೆಲವು ಕಾಲಾನಂತರ ಜೀವಕೋಷ್ಟಕಗಳೆಂಬ ಹೆಸರು ಬಂತು. ಭಾರತದಲ್ಲಿ ಜನಗಣತಿಯ ಆಧಾರದ ಮೇಲೆ ಜಿ. ಎಫ್. ಹಾರ್ಡಿ, ಟಿ. ಜಿ. ಆಕ್ಲಂಡ್, ಎಚ್, ಜಿ. ಡಬ್ಲ್ಯು. ಮೈಕಲ್, ಎಲ್. ಎಸ್. ವೈದ್ಯನಾಥನ್ ಮತ್ತು ಎಸ್. ಪಿ. ಜೈನ್ ಇವರು ಜೀವಕೋಷ್ಟಕಗಳನ್ನು ರಚಿಸಿದ್ದಾರೆ.

ವಿವಿಧ ಕೋಷ್ಟಕಗಳು: ಜೀವಕೋಷ್ಟಕಗಳಲ್ಲಿ ಮುಖ್ಯವಾಗಿ ಎರಡು ಪ್ರರೂಪಗಳುಂಟು. ಇವು ಜೀವಿತೋತ್ತರ ಸಂಭಾವ್ಯತೆಗಳನ್ನು (ಸರ್ವೈವಲ್ ಪ್ರಾಬೆಬಿಲಿಟೀಸ್) ಗಣಿಸುವ ರೀತಿಯನ್ನು ಅವಲಂಬಿಸಿವೆ.

1 ಒಂದು ನಿರ್ದಿಷ್ಟ ಜೀವಿಸಮುದಾಯವನ್ನು ಅದು ಜನಿಸಿದಂದಿನಿಂದ ಅದರ ಎಲ್ಲ ವ್ಯಕ್ತಿಗಳೂ ಸಾಯುವವರೆಗೆ ಹಿಂಬಾಲಿಸಿಕೊಂಡು 

ಆ ಸಮುದಾಯದಲ್ಲಿ ಪ್ರತಿ ವಯಸ್ಸಿನಲ್ಲಿ ಮರಣಹೊಂದಿದ ವ್ಯಕ್ತಿಗಳ ಸಂಖ್ಯೆಯ ಆಧಾರದ ಮೇಲೆ ಪ್ರತಿ ವಯೋಮಿತಿಯಲ್ಲಿ ಮರಣಹೊಂದುವ ಸಂಭಾವ್ಯತೆಯ ಗಣನೆ; ಹೀಗೆ ದೊರೆತ ಸಂಭಾವ್ಯತೆಗಳನ್ನು ಬಳಸಿಕೊಂಡು ಜೀವಕೋಷ್ಟಕಗಳ ನಿರ್ಮಾಣ. ಇಂಥ ಕೋಷ್ಟಕಗಳಿಗೆ ಸಮುದಾಯ ಅಥವಾ ಜನಾಂಗ ಜೀವಕೋಷ್ಟಕಗಳೆಂದು ಹೆಸರು.

2. ಈ ಮೇಲಿನ ಕ್ರಮದ ಬದಲಾಗಿ ಒಂದು ವರ್ಷದಲ್ಲಿಯ ಮರಣಗಳನ್ನು ವಯೋಮಾನಕ್ಕೆ ಅನುಗುಣವಾಗಿ ವರ್ಗೀಕರಿಸಿ ಆವಿತರಣೆಯ ಆಧಾರದ ಮೇಲೆ ಜೀವಿತೋತ್ತರ ಸಂಭಾವ್ಯತೆಗಳ ಗಣನೆ ಮಾಡಿ ಜೀವಕೋಷ್ಟಕಗಳ ರಚನೆ ಎರಡನೆಯ ಪ್ರರೂಪವಾಗುತ್ತದೆ. ಇದಕ್ಕೆ ಚಾಲ್ತಿ ಜೀವಕೋಷ್ಟಕ (ಕರೆಂಟ್ ಲೈಫ್ ಟೇಬಲ್) ಎಂದು ಹೆಸರು.

ಸಮುದಾಯ ಜೀವಕೋಷ್ಟಕಕ್ಕೆ ನೂರಾರು ವರ್ಷಗಳ ದಾಖಲೆಗಳು ಅವಶ್ಯ ಎನ್ನುವುದು ಸ್ಪಷ್ಟ. ಆದ್ದರಿಂದ ಸಾಮಾನ್ಯವಾಗಿ ಪ್ರಚಾರದಲ್ಲಿರುವುದು ಚಾಲ್ತಿ ಜೀವಕೋಷ್ಟಕಗಳೇ. ಇವುಗಳಲ್ಲಿ ಬೇರೆಬೇರೆ ಸಮುದಾಯಗಳ ಅನುಭವವಿರುವುದರಿಂದ ಇವನ್ನು ಯಾವ ಸಮುದಾಯದ ಅನುಭವವೆಂದು ಹೇಳಲಾಗುವುದಿಲ್ಲ. ಆದರೆ ಈ ಕೋಷ್ಟಕಗಳು ಒಂದು ಕಾಲದ ಸರಾಸರಿ ಮರಣ ಪರಿಸ್ಥಿತಿಯನ್ನು ಸಾರಾಂಶ ರೂಪದಲ್ಲಿ ಸೂಚಿಸುತ್ತವೆ. ಆದ್ದರಿಂದಲೇ ಇವುಗಳ ಬಳಕೆ ಹೆಚ್ಚು.

ಜೀವಕೋಷ್ಟಕಗಳು ಕೊಡುವ ವಿವರಣೆಗಳ ಮೇಲೆಯೂ ಅವನ್ನು ವಿಭಾಗಿಸುವುದುಂಟು ಜೀವನದ ಒಂದೊಂದು ವರ್ಷಕ್ಕೂ ವಿವರಗಳನ್ನು ಒದಗಿಸುವ ಕೋಷ್ಟಕಗಳಿಗೆ ಪೂರ್ಣ ಜೀವಕೋಷ್ಟಕಗಳೆಂದೂ ವಯೋಮಾನ ಸಮೂಹಗಳಿಗೆ ಮಾತ್ರ ವಿವರಗಳನ್ನು ಒದಗಿಸುವ ವ್ಯವಸ್ಥೆಗೆ ಸಂಕ್ಷಿಪ್ತ ಜೀವಕೋಷ್ಟಕಗಳೆಂದೂ ಹೆಸರು. ಈ ಎರಡು ರೀತಿಯ ಕೋಷ್ಟಕನಿರ್ಮಾಣ ಪದ್ಧತಿಯಲ್ಲಿ ತತ್ತ್ವತಃ ವ್ಯತ್ಯಾಸವಿರುವಂತೆ ಕಂಡುಬರುವುದಿಲ್ಲ. 

ಕೋಷ್ಟಕನಿರ್ಮಾಣದಲ್ಲಿಯ ಮೂಲಕಲ್ಪನೆಗಳು: ಜೀವಕೋಷ್ಟಕವೆಂದರೆ ಅದೊಂದು ಏಕಕಾಲಕ್ಕೆ ಜನಿಸಿದ ಕಾಲ್ಪನಿಕ ಸಮುದಾಯವೊಂದರ ಜೀವನಚರಿತ್ರೆ. ಈ ಚರಿತ್ರೆ ಸಮುದಾಯದ ಪ್ರತಿಯೊಂದು ವ್ಯಕ್ತಿಯನ್ನೂ ಅದರ ಜನನದಿಂದ ಮರಣದವರೆಗೆ ಸಮೀಕ್ಷಿಸುತ್ತದೆ. ಅದಕ್ಕೆ ಬೇಕಾದ ಮೂಲಕಲ್ಪನೆಗಳನ್ನು ಕೆಳಗಿನಂತೆ ಸಂಗ್ರಹಿಸಬಹುದು:

1 ವೀಕ್ಷಿಸುವ ಸಮುದಾಯ ಮರಣದಿಂದ ಮಾತ್ರ ಕಿರಿದಾಗುತ್ತ ಹೋಗುತ್ತದೆ. ಅಂದರೆ ಜನವಲಸೆಯಿಂದಾಗಿ ಅದು ವ್ಯತ್ಯಾಸವಾಗುವುದಿಲ್ಲ.
2 ಸಮುದಾಯದಲ್ಲಿನ ವ್ಯಕ್ತಿಗಳು ಮೊದಲೇ ಗಣಿಸಿದ ಜೀವಿತೋತ್ತರ ಸಂಭಾವ್ಯತೆಗಳ ರೀತಿಯಲ್ಲಿ ಮರಣಹೊಂದುತ್ತಾರೆ. ಅಲ್ಲದೆ ಆ ಸಂಭಾವ್ಯತೆಗಳು ವ್ಯತ್ಯಾಸವಾಗುವುದಿಲ್ಲ. 
3 ಸಮುದಾಯ ಒಂದು ನಿರ್ದಿಷ್ಟವಾದ ಶಿಷ್ಟ ಜನನಸಂಖ್ಯೆಯಿಂದ (ಸ್ಯಾಂಡರ್ಡ್ ನಂಬರ್ ಆಫ್ ಬತ್ರ್ಸ್) ತನ್ನ ಜೀವನಚರಿತ್ರೆಯನ್ನು ಪ್ರಾರಂಭಿಸುತ್ತದೆ. ಈ ಶಿಷ್ಟ ಜನನ ಸಂಖ್ಯೆಯನ್ನು 1000, 10,000, 100,000 ಎಂದು ಇಟ್ಟು ಕೊಳ್ಳುವುದು ರೂಢಿ. ಇದಕ್ಕೆ ರಾಡಿಕ್ಸ್ ಎಂದು ಹೆಸರು. ಹೀಗೆ ಶಿಷ್ಟ ಜನನ ಸಂಖ್ಯೆಯಿಂದ ಪ್ರಾರಂಭಿಸುವುದು ತುಲನಾತ್ಮಕ ವಿವೇಚನೆಗೆ ಹೆಚ್ಚು ಸಹಾಯಕವಾಗುತ್ತದೆ.
4 ಮೊದಲ ಕೆಲವು ವಯೋಮಿತಿಯ ವರ್ಷಗಳನ್ನುಳಿದು ಉಳಿದೆಲ್ಲ ವರ್ಷಗಳಲ್ಲಿ ಒಂದು ಜನ್ಮದಿವಸದಿಂದ ಮುಂದಿನ ಜನ್ಮದಿವಸದವರೆಗೆ ಮರಣಗಳು ಸಮಸಮವಾಗಿ ಹರಡಿವೆ.
5 ಸಮುದಾಯ ಸಾಮಾನ್ಯವಾಗಿ ಸ್ತ್ರೀಯರನ್ನೇ ಅಥವಾ ಪುರುಷರನ್ನೇ ಒಳಗೊಂಡಿರುತ್ತದೆ.

ಕಲ್ಪನೆ (1)ರಿಂದಾಗಿ ಈ ಕಾಲ್ಪನಿಕ ಜನಸಂಖ್ಯೆಯಲ್ಲಿ ಒಟ್ಟು ಮರಣಗಳ ಸಂಖ್ಯೆ ಜನನ ಸಂಖ್ಯೆಗೆ ಸಮವಾಗಿರುತ್ತದೆ. ಜನನದರ ಮತ್ತು ಮರಣದರಗಳೆರಡೂ ಒಂದೇ ಆಗಿರುವುದು ಇದರ ಕಾರಣ. ಅದ್ದರಿಂದ ಜನಸಂಖ್ಯಾ ಬೆಳೆವಣಿಗೆಯ ದರ ಸೊನ್ನೆ. ಇಂಥ ಜನಸಂಖ್ಯೆಗೆ ಸ್ತಬ್ಧ ಜನಸಂಖ್ಯೆ ಎಂದೂ ಜೀವಕೋಷ್ಟಕ ಜನಸಂಖ್ಯೆ ಎಂದೂ ಹೇಳುತ್ತಾರೆ.

ಜೀವಕೋಷ್ಟಕವನ್ನು ನಿರ್ಮಿಸುವ ವಿಧಾನಗಳು: ಜೀವಕೋಷ್ಟಕ ನಿರ್ಮಾಣದಲ್ಲಿ ಜೀವಿತೋತ್ತರ ಸಂಭಾವ್ಯತೆಗಳ ಗಣನೆ ಬಲು ಮುಖ್ಯ. ಅದಕ್ಕಾಗಿ ಉಪಯೋಗಿಸುವ ಅಂಕೆ ಅಂಶಗಳನ್ನು ಆಧರಿಸಿ ಗಣನೆಯ ವಿಧಾನಗಳು ಬದಲಾಗುತ್ತದೆ. ಜೀವತೋತ್ತರ ಸಾಂಭಾವ್ಯತೆಗಳು ದೊರೆತ ಬಳಿಕ ಉಳಿದ ವಿವರಗಳನ್ನು ಸುಲಭವಾಗಿ ಗಣಿಸಬಹುದು. ಜೀವಕೋಷ್ಟಕ ನಿರ್ಮಾಣವಿಧಾನಗಳನ್ನು ಮುಂದೆ ವಿವರಿಸಿದೆ.

1 ಜನನ ಮರಣ ದಾಖಲೆಗಳ ಮೇಲೆ ಆಧಾರಿತವಾದುದು: ಈ ಪದ್ಧತಿಯಲ್ಲಿ ವಯೋಮಿತಿಯನ್ನು ಅನುಸರಿಸಿ ಮರಣಗಳನ್ನು ವರ್ಗೀಕರಿಸಿದ್ದರೆ ಅವುಗಳ ಸಹಾಯದಿಂದ ಇಡೀ ಜೀವನದ ಪ್ರತಿ ವರ್ಷದಲ್ಲಿ ಅಥವಾ ವರ್ಷಸಮೂಹದಲ್ಲಿ ಮರಣಹೊಂದುವ ಸಂಭಾವ್ಯತೆಯನ್ನು ಕಂಡುಹಿಡಿದುಕೊಂಡು ಆ ಸಂಭಾವ್ಯತೆಗಳನ್ನು ಉಪಯೋಗಿಸಿಕೊಂಡು ಜೀವಕೋಷ್ಟಕವನ್ನು ನಿರ್ಮಿಸುತ್ತೇವೆ. ಇದು ಪ್ರಾಚೀನ ಪದ್ಧತಿ. ಇದರಲ್ಲಿ ವಲಸೆಯಿಂದಾಗಿ ಜನಸಂಖ್ಯೆ ವ್ಯತ್ಯಾಸಗೊಳ್ಳುತ್ತಿಲ್ಲವೆಂದು ಅಂಗೀಕರಿಸಿಕೊಂಡಂತಾಗುತ್ತದೆ. ಈ ವಿಧಾನವನ್ನು ಗ್ರಾಂಟ್ ಹಾಗೂ ಹ್ಯಾಲಿ ಬಳಸಿದ್ದಾರೆ. ಜನನ ಮರಣ ದಾಖಲೆಗಳು ಅನೇಕ ಸಲ 
ದೋಷಯುಕ್ತವಾಗಿರುತ್ತವಾದ್ದರಿಂದ ಈ ವಿಧಾನ ಅಷ್ಟು ರೂಢಿಯಲ್ಲಿಲ್ಲ.

2 ಜನಗಣತಿಯ ಮೇಲೆ ಆಧಾರಿತವಾದುದು: ಎರಡು ಜನಗಣತಿಯ ಅಂಕೆ ಅಂಶಗಳು ತಿಳಿದಿದ್ದರೆ ಮೊದಲನೆಯ ಜನಗಣತಿಯಲ್ಲಿ ಒಂದು ವಯೋಮಿತಿಯಲ್ಲಿ ಗಣಿಸಲ್ಪಟ್ಟು ಎರಡನೆಯ ಜನಗಣತಿಯವರೆಗೆ ಬದುಕಿ ಉಳಿದವರು ಆ ವೇಳೆಗೆ ಜನಗಣತಿಗಳ ನಡುವಿನ ವರ್ಷಗಳಷ್ಟು ದೊಡ್ಡವರಾಗಿರುತ್ತಾರೆ. ಆದ್ದರಿಂದ ಎರಡು ಜನಗಣತಿಗಳಲ್ಲಿನ ವಯೋಮಿತಿ ವಿತರಣೆಯ ಆಧಾರದ ಮೇಲೆ ಬೇರೆಬೇರೆ ವಯಸ್ಸಿನ ಜನಗಣತಿಯ ಮಧ್ಯಾಂತರ ವರ್ಷಕಾಲ ಬದುಕಿರಬಹುದಾದ ಸಂಭಾವ್ಯತೆಗಳನ್ನು ಕಂಡುಹಿಡಿಯಬಹುದು. ಉದಾಹರಣೆಗೆ  ವರ್ಷದಲ್ಲಿ  ವಯಸ್ಸಿನವರ ಸಂಖ್ಯೆ  ಇದ್ದರೆ 5 ವರ್ಷದ ತರುವಾಯ ಜನಗಣತಿಯಲ್ಲಿ ಇವರು  ವರ್ಷ ವಯಸ್ಸಿನವರಾಗಿರುತ್ತಾರೆ. ಆದ್ದರಿಂದ ಎರಡನೆಯ ಜನಗಣತಿಯಲ್ಲಿ  ವರ್ಷ ವಯಸ್ಸಿನವರು  ಇದ್ದರೆ ನಿಂದ  ವರ್ಷದವರು 5 ವರ್ಷ ಬದುಕುವ ಸಂಭಾವ್ಯತೆ 

ಎಂದು ಗಣಿಸಬಹುದು. ಅನಂತರ ಜೀವಕೋಷ್ಟಕವನ್ನು ನಿರ್ಮಿಸುವುದು ಸುಲಭದ ಕೆಲಸ. ಜನನ ಮರಣ ದಾಖಲೆಗಳು ದೊರೆಯದಿದ್ದಾಗ ಈ ಪದ್ದತಿಯನ್ನೇ ಉಪಯೋಗಿಸಬೇಕಾಗುತ್ತದೆ. ಇದನ್ನು ಬಳಸುವಾಗ ಬಾಲ ಹಾಗೂ ವೃದ್ಧ ವಯಸ್ಸುಗಳಲ್ಲಿ ಜೀವಿತೋತ್ತರ ಸಂಭಾವ್ಯತೆಗಳನ್ನು ಕಂಡುಹಿಡಿಯಲು ಗಣಿತೋಕ್ತಿಗಳ ನೆರವನ್ನು ತೆಗೆದುಕೊಳ್ಳುವುದು ಸಾಮಾನ್ಯ ರೂಢಿ. ಆ ವಯಸ್ಸುಗಳಲ್ಲಿ ಜೀವಿತೋತ್ತರ ಸಂಭಾವ್ಯತೆ ವರ್ಷದಿಂದ ವರ್ಷಕ್ಕೆ ಬಹಳ ಬದಲಾಗುವುದರಿಂದ ಮೇಲೆ ತಿಳಿಸಿದ ರೀತಿಯಲ್ಲೇ ಸಂಭಾವ್ಯತೆಗಳನ್ನು ಕಂಡುಹಿಡಿಯುವುದು ಸೂಕ್ತವೆನಿಸಲಾರದು. ಈ ವಿಧಾನದ ಬಳಕೆಯನ್ನು ಭಾರತದ ಜೀವವಿಮಾಶಾಸ್ತ್ರ ವರದಿಯಲ್ಲಿ ನಿರ್ಮಿಸಲಾಗಿರುವ ಜೀವಕೋಷ್ಟಕಗಳಲ್ಲಿ ಕಾಣಬಹುದು. 

3 ಜನನ ಮರಣ ದಾಖಲೆಗಳ ಮೇಲೂ ಜನಗಣತಿಯ ಮೇಲೂ ಆಧಾರಿತವಾದುದು: ಈ ವಿಧಾನದಲ್ಲಿ ಪ್ರಸ್ತುತ ವರ್ಷದಲ್ಲಿಯ ಮರಣಗಳನ್ನು ವಯೋಮಿತಿಗೆ ಅನುಸಾರವಾಗಿ ವರ್ಗೀಕರಿಸಿ ಅದೇ ವರ್ಷದಲ್ಲಿ ಸರಾಸರಿಯಾಗಿ ಆ ವಯೋಮಿತಿಯಲ್ಲಿರುವ ಜನಸಂಖ್ಯೆಯನ್ನು ಜನಗಣತಿಗಳ ಆಧಾರದ ಮೇಲೆ ಕಂಡುಹಿಡಿದು ವಯೋಮಿತಿ ವಿಶಿಷ್ಟ ಮರಣದರಗಳನ್ನು ಗಣಿಸುತ್ತಾರೆ. ಈ ಮರಣದರಗಳಿಂದ ಮರಣ ಸಂಭಾವ್ಯತೆಗಳನ್ನು ಕಂಡುಹಿಡಿದು ಜೀವಕೋಷ್ಟಕವನ್ನು ನಿರ್ಮಿಸುತ್ತಾರೆ. ಉದಾಹರಣೆಗೆ  ಯು  ವರ್ಷದಲ್ಲಿ  ವರ್ಷ ವಯಸ್ಸಿನ ಮರಣಗಳ ಸಂಖ್ಯೆಯಾದರೆ  ವರ್ಷ ವಯೋವಿಶಿಷ್ಟ ಮರಣದರ ಎಂದು ಗಣಿಸಬಹುದು. ಇಲ್ಲಿ  ಎನ್ನುವುದು ಸರಾಸರಿ ಜನಸಂಖ್ಯೆಯನ್ನು ಸೂಚಿಸುತ್ತದೆ. ಆಗ  ವರ್ಷ ವಯೋಮಿತಿಯನರು ಮತ್ತೊಂದು ವರ್ಷದೊಳಗೆ ಮರಣ ಹೊಂದಬಹುದಾದ ಸಂಭಾವ್ಯತೆ

ಎಂದು ಗಣಿಸುತ್ತೇವೆ. ಇಲ್ಲಿ ಮರಣಗಳು  ಮತ್ತು  ವರ್ಷ ವಯೋಮಿತಿಯಲ್ಲಿ ಸಮವಾಗಿ ಹರಡಿಕೊಂಡಿವೆಯೆಂದು ಕಲ್ಪಿಸಿಕೊಳ್ಳಲಾಗಿದೆ. ಆದ್ದರಿಂದ ಈ ಸೂತ್ರವನ್ನು ಬಾಲವಯಸ್ಸುಗಳಿಗೆ ಮತ್ತು ವೃದ್ಧ ವಯಸ್ಸುಗಳಿಗೆ ಉಪಯೋಗಿಸಬಾರದು. ಅಲ್ಲಿಯ ಸಂಭಾವ್ಯತೆಗಳನ್ನು ಶೋಧಿಸಲು ಬೇರೆ ಗಣಿತವಾಕ್ಯಗಳನ್ನು ಬಳಸುತ್ತಾರೆ. ಹೀಗೆ ಸಂಭಾವ್ಯತೆಗಳನ್ನು ಶೋಧಿಸಿದ ತರುವಾಯ ಜೀವಕೋಷ್ಟಕದ ಇತರ ವಿವರಗಳನ್ನು ಕಂಡುಹಿಡಿಯಬಹುದು. ಈ ಪದ್ಧತಿ ಈಗೀಗ ಹೆಚ್ಚಿನ ದೇಶಗಳಲ್ಲಿ ಬಳಕೆಯಾಗುತ್ತಿದೆ. 

ಮೇಲಿನ ಮೂರು ರೀತಿಯಿಂದ ಜೀವಿತೋತ್ತರ ಸಂಭಾವ್ಯತೆಗಳನ್ನು ಗಣಿಸಿದ ಬಳಿಕ ಜೀವಕೋಷ್ಟಕದ ಇತರ ವಿವರಗಳನ್ನು ಈ ಕೆಳಗಿನಂತೆ ಗಣನೆಮಾಡಬಹುದು.  ಅದರ್ಶ ಜನಸಂಖ್ಯೆಯಿಂದ ಪ್ರಾರಂಭಿಸೋಣ. ಆಗ ನಿರ್ದಿಷ್ಟವಾಗಿ ವರ್ಷ ವಯಸ್ಸಿನ ವರೆಗೆ ಬದುಕಿ ಉಳಿದವರ ಸಂಖ್ಯೆ  ನ್ನು ಕಂಡುಹಿಡಿಯಲು ಸೂತ್ರವನ್ನು ಉಪಯೋಗಿಸುತ್ತೇವೆ. ಇಲ್ಲಿ ಜೀವಿತೋತ್ತರ ಸಂಭಾವ್ಯತೆಯನ್ನು ತೋರಿಸುತ್ತದೆ.

 ಕಾಲ್ಪನಿಕ ಸಮುದಾಯ  ಮತ್ತು  ವರ್ಷ ವಯಸ್ಸುಗಳ ಮಧ್ಯೆ ಜೀವಿಸಿದ ಒಟ್ಟು ವ್ಯಕ್ತಿ ವರ್ಷಗಳು (ಪರ್ಸನ್ ಇಯರ್ಸ್, ಇದನ್ನೇ ಈ ವಯೋಮಿತಿಯಲ್ಲಿ ವಾಸಿಸಿದ ಸರಾಸರಿ ಜನಸಂಖ್ಯೆಯೆಂದೂ ತಿಳಿಯಬಹುದು). ಇಲ್ಲಿ  ನ ಬೆಲೆಯನ್ನು  ಆದಾಗ  ಆದಾಗ  ಆದಾಗ ಇತ್ಯಾದಿ ಆದಾಗ  ಎಂದು ಇಟ್ಟುಕೊಳ್ಳಬಹುದು. ಕಾಲ್ಪನಿಕ ಸಮುದಾಯ  ವರ್ಷ ವಯಸ್ಸಿನ ಮೇಲೆ ಜೀವಿಸಿದ ವ್ಯಕ್ತಿ ವರ್ಷಗಳು.  ವರ್ಷ ವಯಸ್ಸಿನ ವ್ಯಕ್ತಿಯ ಸರಾಸರಿ ಜೀವನ (ಇದಕ್ಕೆ ವರ್ಷ ವಯೋಮಿತಿಯಲ್ಲಿ ಜೀವನ ನಿರೀಕ್ಷೆಯೆಂದು ಹೆಸರು). ಜೀವನ ನಿರೀಕ್ಷೆಗಳಲ್ಲೆಲ್ಲ ಜನನ ಜೀವನ ನಿರೀಕ್ಷೆ (ಲೈಫ್ ಎಕ್ಸ್‍ಪೆಕ್ಟೇಷನ್ ಅಟ್ ಬರ್ತ್) ಅತಿ ಮುಖ್ಯವಾದದ್ದು. ಅದು ಒಂದು ಕಾಲದಲ್ಲಿರುವ ಒಂದು ಜನಾಂಗದ ವ್ಯಕ್ತಿಯ ಪೂರ್ಣ ಜೀವಿತಾವಧಿಯನ್ನು ತೋರಿಸುತ್ತದೆ. ಜೀವಕೋಷ್ಟಕ ಮರಣದರವನ್ನು  ತೌಲನಿಕ ಅಧ್ಯಯನಗಳಲ್ಲಿ ಧಾರಾಳವಾಗಿ ಉಪಯೋಗಿಸಬಹುದು.
ಸಂಕ್ಷಿಪ್ತ ಜೀವಕೋಷ್ಟಕಗಳು: ಜೀವಕೋಷ್ಟಕವನ್ನು ನಿರ್ಮಿಸಲು ಬೇಕಾದ ವಿವರಗಳು ವಯಸ್ಸಿನ ಪ್ರತಿಯೊಂದು ವರ್ಷಕ್ಕೆ ದೊರೆಯದ್ದರಿಂದ ಮತ್ತು ಪ್ರಜಾಶಾಸ್ತ್ರಾಧ್ಯಯನದಲ್ಲಿ ಬಹಳ ಸಲ ವಯೋಮಿತಿ ಸಮುದಾಯಗಳನ್ನೇ ಬಳಸುವುದು ಅನುಕೂಲವಾದ್ದರಿಂದ ಪೂರ್ಣ ಜೀವಕೋಷ್ಟಕವನ್ನು ನಿರ್ಮಿಸುವ ಬದಲು ಅನೇಕ ಸಲ ಸಂಕ್ಷಿಪ್ತ ಜೀವಕೋಷ್ಟಕವನ್ನಷ್ಟೆ ಸಿದ್ಧಪಡಿಸುವುದು ರೂಢಿ. ಇದಕ್ಕಾಗಿ ಸುಲಭ ಮಾರ್ಗಗಳನ್ನು ಕಂಡುಹಿಡಿಯಲಾಗಿದೆ. ಇವುಗಳ ಪೈಕಿ ರೀಡ್-ಮೆರೆಲ್ ವಿಧಾನ ಮತ್ತು ಗ್ರೆವಿಲ್ಲನ ವಿಧಾನ-ಇವೆರಡು ಹೆಚ್ಚು ಬಳಕೆಯಲ್ಲಿವೆ. ವಯೋಮಿತಿ ಸಮುದಾಯಗಳಿಗೆ ಮರಣದರಗಳು ತಿಳಿದಿದ್ದಾಗ ಅವನ್ನು ಉಪಯೋಗಿಸಿ ಜೀವಿತೋತ್ತರ ಸಂಭಾವ್ಯತೆಗಳನ್ನು ಕಂಡುಹಿಡಿಯುವ ಸೂತ್ರಗಳನ್ನು ಅವರು ಕೊಟ್ಟಿದ್ದಾರೆ ರೀಡ್-ಮೆರೆಲ್‍ರು ಮರಣದರಗಳಿಗೆ ಮರಣ ಸಂಭಾವ್ಯತೆಗಳನ್ನು ಒದಗಿಸುವ ಕೋಷ್ಟಕಗಳನ್ನು ತಯಾರಿಸಿದ್ದಾರೆ. ಜೀವಕೋಷ್ಟಕದ ಇತರ ಕಲಮುಗಳನ್ನು ಗಣನೆ ಮಾಡಲು ಸೂತ್ರಗಳು ವಿವರಿಸಲ್ಪಟ್ಟಿವೆ. ಆದರೆ ತತ್ತ್ವತಃ ಸಂಕ್ಷಿಪ್ತ ಜೀವಕೋಷ್ಟಕ ನಿರ್ಮಾಣ ಪೂರ್ಣ ಜೀವಕೋಷ್ಟಕ ನಿರ್ಮಾಣದಲ್ಲಿಯ ತತ್ತ್ವಗಳನ್ನೆ ಒಳಗೊಂಡಿದೆ. ಸಂಕ್ಷಿಪ್ತ ಜೀವಕೋಷ್ಟಕಗಳನ್ನು ನಿರ್ಮಿಸಲು ಜಾರ್ಜ್‍ಕಿಂಗನ ಪದ್ಧತಿ, ಆದರ್ಶಕೋಷ್ಟಕದ ದರಗಳನ್ನು ವೀಕ್ಷಿತ ದರಗಳೊಡನೆ ತುಲನೆ ಮಾಡುವ ಪದ್ಧತಿ ಮುಂತಾದವು ಬಳಕೆಯಲ್ಲಿವೆ. 
ಜೀವಕೋಷ್ಟಕಗಳ ಉಪಯೋಗ: ಜೀವಕೋಷ್ಟಕ ಒಂದು ಜನಾಂಗದಲ್ಲಿಯ ಮರಣ ಪರಿಸ್ಥಿತಿಯನ್ನು ಸೂಚಿಸುತ್ತದೆ. ಆದ್ದರಿಂದ ಮಾನವ ಜೀವಿತದ ಮೇಲೆ ಅವಲಂಬಿತವಾದ ಎಲ್ಲ ಯೋಜನೆಗಳಲ್ಲೂ ಅವನ್ನು ಬಳಸಬೇಕಾಗುತ್ತದೆ. ಉದಾಹರಣೆಗೆ ವಿಮಾ ಸಂಸ್ಥೆಯವರಿಗೆ ಈ ಕೋಷ್ಟಕ ಅತ್ಯಗತ್ಯ. ಹಾಗೆಯೇ ರಾಷ್ಟ್ರೀಯ ಜನಸಂಖ್ಯಾ ಮುನ್ನೋಟವನ್ನು ಗಣಿಸಲು ಜೀವಕೋಷ್ಟಕದ ನೆರವು ಬೇಕೇಬೇಕು. ಇದಲ್ಲದೆ ಪ್ರಜಾಶಾಸ್ತ್ರಾಧ್ಯಯನಕ್ಕೆ ಜೀವಕೋಷ್ಟಕ ಅನೇಕ ರೀತಿಗಳಲ್ಲಿ ಉಪಯೋಗವಾಗುತ್ತದೆ. ಸಂತಾನೋತ್ಪತ್ತಿ ಮಾಪನೆಯಲ್ಲಿ, ಅನಾಥಾಶ್ರಮಗಳ ಯೋಜನೆಯಲ್ಲಿ, ವಲಸೆಗಾರರ ಸಂಖ್ಯೆಯನ್ನು ಕಂಡುಹಿಡಿಯುವಲ್ಲಿ, ಅಂಕೆಅಂಶಗಳ ಗುಣದೋಷಗಳನ್ನು ಅರಿಯುವಲ್ಲಿ ಸಹ ಈ ಕೋಷ್ಟಕದ ನೆರವು ಉಂಟು. 

ಜೀವಕೋಷ್ಟಕದ ಒಂದು ನಮೂನೆ: ಜೀವಕೋಷ್ಟಕದ ಒಂದು ನಮೂನೆಯನ್ನು ಸಂಯುಕ್ತ ರಾಷ್ಟ್ರ ಸಂಘದ ಜೀವಕೋಷ್ಟಕಗಳಿಂದ ಆಯ್ದು ಇಲ್ಲಿ ತೋರಿಸಿದೆ. ಇದು  ವರ್ಷ. ಜನನ ಜೀವನ ನಿರೀಕ್ಷೆಗೆ ಸಂಬಂಧಿಸಿದ ಪುರುಷ ಜೀವನವನ್ನು ತೋರಿಸುವ ಸಂಕ್ಷಿಪ್ತ ಜೀವಕೋಷ್ಟಕ. ಇದರಲ್ಲಿ  ಎಂಬುದು  ವರ್ಷ ವಯಸ್ಸಿನವನು ವರ್ಷ ವಯಸ್ಸಾಗುವುದರೊಳಗೆ ಸಾಯುವ ಸಂಭಾವ್ಯತೆಯನ್ನು ತೋರಿಸುತ್ತದೆ.  ಎಂಬುದು ನಿರ್ದಿಷ್ಟವಾಗಿ  ವರ್ಷ ವಯಸ್ಸಿನ ವರೆಗೆ ಜೀವಿಸಿ ಉಳಿದಿರುವವರ ಸಂಖ್ಯೆಯನ್ನೂ  ಎಂಬುದು  ಮತ್ತು ವರ್ಷ ವಯೋಮಿತಿಯಲ್ಲಿ ಕಾಲ್ಪನಿಕ ಸಮುದಾಯ ಜೀವಿಸುವ ಒಟ್ಟು ವರ್ಷಗಳನ್ನೂ  ಎಂಬುದು  ವರ್ಷ ವಯಸ್ಸಿನ ತರುವಾಯ ಕಾಲ್ಪನಿಕ ಸಮುದಾಯ ಜೀವಿಸುವ ಒಟ್ಟು ವ್ಯಕ್ತಿ ವರ್ಷಗಳನ್ನು ಎಂಬುದು  ವರ್ಷ ವಯಸ್ಸಿನ ವ್ಯಕ್ತಿಯ ಜೀವನ ನಿರೀಕ್ಷೆಯನ್ನೂ ಸೂಚಿಸುತ್ತವೆ. ಬೆಲೆಗಳು ತಿಳಿದಿವೆಯೆಂದಿಟ್ಟುಕೊಂಡರೆ ಉಳಿದ ವಿವರಗಳನ್ನು ಗಣಿಸುವುದು ಸುಲಭ.

ಪುರುಷ ಜೀವಕೋಷ್ಟಕ
ವಯಸ್ಸು

1000

0
1-4
5-9
10-14
15-19
20-24
25-29
30-34
35-39
40-44
45-49
50-54
55-59
60-64
65-69
70-74
75-79
80-84
85+
169.09
82.07
25.65
17.22
26.28
37.63
39.40
42.27
47.67
58.06
74.04
96.89
129.43
176.23
245.62
345.17
470.10
626.70
-
100,000
83,091
76,272
74,316
73,036
71,117
68,441
65,744
62,965
59,963
56,482
52,300
47,233
41,120
33,873
25,553
16,733
8,867
3,310
87,318
318,044
376,470
368,380
360,382
348,895
335,462
321,772
307,320
291,112
271,955
248,832
220,882
187,482
148,565
105,715
64,000
30,442
11,651
4,404,679
4,317,361
3,999,317
3,622,847
3,254,467
2,894,085
2,545,190
2,209,728
1,887,956
1,580,636
1,289,524
1,017,569
768,737
547,855
360,373
211,808
106,093
42,093
11,651
44.05
51.96
52.44
48.75
44.56
40.70
37.19
33.61
29.98
26.36
22.83
19.46
16.28
13.32
10.64
8.29
6.34
4.75
3.52

(ಎಂ.ಎಸ್.ಎಂ.ಯು.)
ಆಯುರ್ನಿರೀಕ್ಷಾಸೂಚಿ: ಒಂದು ರಾಷ್ಟ್ರದ ಜೀವಕೋಷ್ಟಕವನ್ನು ಆಧರಿಸಿ ಅದರ ಪ್ರಜೆಗಳ ಸರಾಸರಿ ಆಯುಷ್ಯವನ್ನೂ ಪ್ರತಿಯೊಂದು ವಯಸ್ಸಿನಲ್ಲಿನ ಮರಣ ಸಂಭಾವ್ಯತೆಯನ್ನೂ ತಿಳಿಸುವ ಯಾದಿ. ಒಂದು ವರ್ಷ ಗತಿಸಿದ ಮತ್ತು ಅದೇ ವರ್ಷ ಜನಿಸಿದ ಶಿಶುಗಳ ಸಂಖ್ಯೆಗಳ ನಡುವಿನ ನಿಷ್ಪತ್ತಿ ಮೊದಲ ವರ್ಷದ ಶಿಶು ಮರಣದ ಸಂಭಾವ್ಯತೆಯನ್ನು ನೀಡುತ್ತದೆ. ಇದರಿಂದ ಮೊದಲ ವರ್ಷದ ಶಿಶುಗಳ ಆಯುರ್ನಿರೀಕ್ಷಾಸೂಚಿಯನ್ನೂ ನಿಗಮಿಸಬಹುದು. ಇದೇ ಪ್ರಕಾರ ಒಂದು ವರ್ಷ ಯಾವುದೇ ನಿರ್ದಿಷ್ಟ ವಯೋಮಿತಿಯಲ್ಲಿ ಅಳಿದವರ ಹಾಗೂ ಇದ್ದವರ ಸಂಖ್ಯೆಗಳ ನಡುವಿನ ನಿವೃತ್ತಿಯಿಂದ ಆ ವಯಸ್ಸಿನ ವ್ಯಕ್ತಿಗಳ ಆಯುರ್ನಿರೀಕ್ಷಾಸೂಚಿಯನ್ನು ನಿಗಮಿಸಬಹುದು.
ಪ್ರಜೆಗಳಲ್ಲಿ ಆಗತಾನೇ ಹುಟ್ಟಿದ ಶಿಶುವಿನಿಂದ ಹಿಡಿದು ನೂರು ವರ್ಷಕ್ಕೂ ಮೇಲ್ಪಟ್ಟು ಬದುಕಿ ಬಾಳುವವರು ಇದ್ದೇ ಇರುತ್ತಾರೆ. ಪ್ರತಿ ವಯಸ್ಸಿನವರಿಗೂ ಒಂದು ನಿರ್ದಿಷ್ಟವಾದ ಮರಣಪ್ರಮಾಣವಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಒಂದು ವರ್ಷದಲ್ಲಿ ಒಂದು ಸಾವಿರ ಜನನಗಳಾದರೆ ಆ ವರ್ಷದ ಕೊನೆಯಲ್ಲಿ ಸುಮಾರು ನೂರು ಶಿಶುಗಳು ಅಸುನೀಗಿರುತ್ತವೆ. ಇದು ಶಿಶುಮರಣಪ್ರಮಾಣ. ಇದೇ ರೀತಿ ಪ್ರತಿ ವಯಸ್ಸಿನವರಿಗೂ ಒಂದು ನಿರ್ದಿಷ್ಟವಾದ ಮರಣಪ್ರಮಾಣ ಉಂಟು. ನಿಗದಿಯಾದ ಒಂದು ಅವಧಿಯಲ್ಲಿ ಆಯಾ ವಯಸ್ಸಿಗೆ ತಕ್ಕಂತೆ ಮರಣಪ್ರಮಾಣದ ಪ್ರಕಾರ ಎಷ್ಟು ಮಂದಿ ಅಸು ನೀಗುತ್ತಾರೆ ಎಂಬುದನ್ನು ಗಣನೆಗೆ ತಂದುಕೊಂಡು ಕೊನೆಯ ವ್ಯಕ್ತಿ ಸಾಯುವತನಕ ಈ ಕ್ರಮವನ್ನು ಅನುಸರಿಸಿ ಪ್ರಜೆಗಳೆಲ್ಲರೂ ಯಾವ ರೀತಿಯ ವಿಪತ್ತಿಗೊಳಗಾಗುತ್ತಾರೆ ಎಂಬುದನ್ನು ತಿಳಿಸುವ ಯಾದಿಯೇ ಆಯುರ್ನಿರೀಕ್ಷಾಸೂಚಿ. 
ಪ್ರತಿಬಾರಿ ಜನಗಣತಿಯಾದ ಬಳಿಕ (ಹತ್ತು ವರ್ಷಕ್ಕೊಮ್ಮೆ) ಈ ಆಯುರ್ನಿರೀಕ್ಷಾ ಸೂಚಿಗಳನ್ನು ತಜ್ಞರು ಸಿದ್ಧಗೊಳಿಸುವುದು ವಾಡಿಕೆ (ಈಗ ಸದ್ಯಕ್ಕೆ 1941-50ರ ಆಯುರ್ನಿರೀಕ್ಷಾಸೂಚಿ ಮಾತ್ರ ಅಧಿಕೃತವಾಗಿ ತಯಾರಾಗಿದೆ). ಇದನ್ನು ಸಿದ್ಧಗೊಳಿಸಲು ಹಿಂದಿನ ಹತ್ತು ವರ್ಷಗಳಿಗೆ ಅನ್ವಯಿಸುವ ಮರಣ ಪ್ರಮಾಣಗಳೇ ಆಧಾರ. ಈ ಸೂಚಿಯನ್ನು ಸಿದ್ಧಗೊಳಿಸುವಲ್ಲಿನ ತಾತ್ತ್ವಿಕ ಹಿನ್ನೆಲೆ ಇಷ್ಟು: ಒಂದೇ ದಿನ ಹುಟ್ಟಿದ 100,000 ಶಿಶುಗಳಿಂದ ಪ್ರಾರಂಭಮಾಡಿ, ಪ್ರತಿವಯಸ್ಸಿನ ಮರಣಪ್ರಮಾಣದ ಪ್ರಕಾರ ಸಾಯುವವರೆಷ್ಟು, ಉಳಿಯುವವರೆಷ್ಟು ಎಂಬುದನ್ನು ಕೊನೆಯ ವ್ಯಕ್ತಿ ಇರುವ ತನಕ ಲೆಕ್ಕ ಹಾಕುತ್ತ ಹೋಗುತ್ತಾರೆ. ಸಾಮಾನ್ಯವಾಗಿ ಪುರುಷರಿಗೆ ಹಾಗೂ ಸ್ತ್ರೀಯರಿಗೆ ಪ್ರತ್ಯೇಕವಾದ ಸೂಚಿಗಳಿರುತ್ತವೆ. ಭಾರತಕ್ಕೆ 1941-50ರ ದಶಕಾವಧಿಗೆ ಅನ್ವಯಿಸುವ ಪುರುಷರ ಆಯುರ್ನಿರೀಕ್ಷಾಸೂಚಿಯನ್ನು ಮುಂದಿನ ಯಾದಿಯಲ್ಲಿ ಕೊಟ್ಟಿದೆ. ಈ ಸೂಚಿಯಲ್ಲಿ ಆಯಾ ವಯಸ್ಸಿನ ಬಳಿಕ ಇನ್ನೂ ಜೀವಂತವಾಗಿರಬಹುದೆಂದು ಊಹಿಸಲಾದ ಆಯುರ್ನಿರೀಕ್ಷೆಯ ಅವಧಿಯನ್ನು ನೀಟಸಾಲು 8 ಅಂದರೆ  ಸೂಚಿಸುತ್ತದೆ. ಸಮಗ್ರ ಭಾರತದ ಪುರುಷರಲ್ಲಿ ಜನನಾನಂತರ 32-45 ವರ್ಷಗಳ ಸರಾಸರಿ ಜೀವನ ನಿರೀಕ್ಷೆ ಇದೆ ಎಂದಂತಾಯಿತು (1968ರಲ್ಲಿ ಅಂದಾಜು ಮಾಡಿರುವ ಆಯುರ್ನಿರೀಕ್ಷೆ ಪುರುಷರಿಗೆ 53.2 ಹಾಗೂ ಸ್ತ್ರೀಯರಿಗೆ 51.9 ವರ್ಷಗಳು). 

ಅಖಿಲ ಭಾರತ ಜೀವಕೋಷ್ಟಕ (ಪುರುಷರು) 1941-50

ವ
ಯ
ಸ್ಸು
ವಯಸ್ಸಿನಲ್ಲಿ
ಬದುಕಿರುವವರು
 ಮತ್ತು  ನೇ
ವಯಸ್ಸಿನಲ್ಲಿ
ಸಾಯುವವರು
ಮರಣ
ಪ್ರಮಾಣ
ಬದುಕಿ ಉಳಿದವರ
ಪ್ರಮಾಣ
 ಮತ್ತು  ನೇ
ವಯಸ್ಸಿನಲ್ಲಿ
ಬದುಕಿರುವವರು
 ವಯಸ್ಸನ್ನು
ದಾಟಿ
ಉಳಿದಿರುವವರು
ವಯಸ್ಸಿ£ ಬಳಿಕ ಜೀವಿಸುವ ಸರಾಸರಿ ಅವಧಿ

1
2
3
4
5
6
7
8

0
1
2 
3
4
-
-
-
95
96
97
98
99

142, 759
115,635
108,576
104,616
102,006
-
-
-
21
12
6
3
1
27,124
7,059
3,960
2,610
2,006
-
-
-
9
6
3
2
1
0.19000
0.06106
0.03648
0.02495
0.01967
-
-
-
0.40957
0.42932
0.44964
0.47046
0.49176
0.81000
0.93896
0.96352
0.97505
0.98033
-
-
-
0.59043
0.57068
0.55036
0.52954
0.50824
123,143
111,889
106,591
103,392
101,122
-
-
-
16
9
5
2
-

4,632,557
4,509,414
4,397,525
4,290,934
4,187,542
-
-
-
32
16
7
2
-
32.45
39.00
40.50
41.02
41.05
-
-
-
1.52
1.34
1.17
0.67
-

ಟಿಪ್ಪಣಿ : ಮೇಲಿನ ಸೂಚಿಯಲ್ಲಿ ನೀಟಸಾಲು 6, 7, ಮತ್ತು 8ರಲ್ಲಿ ನಮೂದಿಸಿರುವ ಅಂಶವನ್ನು ಗ್ರಹಿಸಲು ಸ್ತಬ್ಧ ಜನಸಂಖ್ಯೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಆವಶ್ಯಕ. ಉದಾಹರಣೆಗೆ ಒಂದು ಮಾದರಿ ಜನಸಮುದಾಯ ಉಂಟು ಎಂದು ಭಾವಿಸೋಣ. ಈ ಸಮುದಾಯದಿಂದ ಹೊರಗೆ ಹೋಗುವವರಾಗಲಿ ಇದಕ್ಕೆ ಹೊರಗಿನಿಂದ ಬಂದು ಸೇರುವವರಾಗಲಿ ಇಲ್ಲವೆಂದೂ ಇದರಲ್ಲಿ ವರ್ಷಂಪ್ರತಿ 142,759 ಗಂಡು ಶಿಶುಗಳ ಜನನವಾಗುತ್ತದೆಂದೂ ತಿಳಿಯೋಣ. (ವರ್ಷದುದ್ದಕ್ಕೂ ಈ ಜನನಗಳು ಒಂದೇ ಸಮ ಹಂಚಲ್ಪಟ್ಟಿವೆ ಅಂದರೆ ದಿವಸಕ್ಕೆ ಆದ 142,759(365). ಎರಡು ವಯಸ್ಸಿನ ಅಂತರದಲ್ಲಿರುವವರು ಸಾವಿಗೀಡಾಗಿರುವ ಸಂಭಾವ್ಯತೆ ನೀಟಸಾಲು 4ರಲ್ಲಿ ತೋರಿಸಿರುವಂತೆ ನಿಖರ ಪ್ರಮಾಣದಲ್ಲಿ ಆಗುತ್ತದೆ. ಇಷ್ಟೇ ಅಲ್ಲದೆ ಈ ಪರಿಸ್ಥಿತಿ ಮುಂದಿನ ಎಲ್ಲ ಕಾಲಗಳಿಗೂ ಅನ್ವಯಿಸುತ್ತದೆ. ಹೀಗಿರುವಲ್ಲಿ ಸಾಯುವವರ ಒಟ್ಟು ಸಂಖ್ಯೆ ಕೂಡ  ಅಂದರೆ ಪ್ರತಿವರ್ಷ 142,759 ಆಗುತ್ತದೆ. ವಿವಿಧ ವಯಸ್ಸುಗಳಲ್ಲಿ ಇರುವವರ ಸಂಖ್ಯೆ ಕೂಡ ಎಲ್ಲ ನೀಟಸಾಲುಗಳಲ್ಲೂ ಒಂದೇ ಇರುತ್ತದೆ. ಅಂದರೆ ಜನಸಮುದಾಯದ ವಿವಿಧ ವಯಸ್ಕರ ಸಂಖ್ಯೆ ಹಾಗೂ ಒಟ್ಟು ಜನಸಂಖ್ಯೆಯಲ್ಲಿ ಬದಲಾವಣೆ ಇಲ್ಲ ಎಂದಂತಾಯಿತು. ಇದಕ್ಕೆ ಸ್ತಬ್ಧ ಜನಸಂಖ್ಯೆ ಅಥವಾ ಜೀವಕೋಷ್ಟಕ ಜನಸಂಖ್ಯೆ ಎಂದು ಹೆಸರು. ಇದೊಂದು ಮಾದರಿ ಅಷ್ಟೆ, ವಾಸ್ತವವಾದದ್ದಲ್ಲ. ಏಕೆಂದರೆ ಪ್ರತಿವರ್ಷವೂ ಜನನ ಒಂದೇ ಸಂಖ್ಯೆಯಲ್ಲಿ ಆಗಲಾರದು ಹಾಗೂ ವಿವಿಧ ವಯಸ್ಕರ ಮರಣಪ್ರಮಾಣ ಯಾವಾಗಲೂ ಒಂದೇ ಪ್ರಮಾಣದಲ್ಲಿರಲಾರದು. ಜೊತೆಗೆ ವಲಸೆಗಳಿದ್ದೇ ಇರುತ್ತವೆ. ಹೀಗಿದ್ದರೂ ಗಣನೆ ಮಾಡಲು ಸರಳವಾಗುವಂತೆ ಈ ಕಾಲ್ಪನಿಕ ಜನಸಂಖ್ಯೆಯನ್ನು ಇಟ್ಟುಕೊಳ್ಳುವುದು ವಾಡಿಕೆ.
[ಆಧಾರ : ಸೆನ್ಸಸ್ ಆಫ್ ಇಂಡಿಯ-ಆ್ಯಕ್ಚುರಿಯಲ್ ರಿಪೋಟ್ರ್ಸ್ ಫಾರ್
ದಿ ಸೆನ್ಸಸ್ (ರಿಪ್ರಿಂಟ್), 1960, ಪುಟಗಳು 444-445].

ವಿವಿಧ ದೇಶಗಳ ಆಯುರ್ನಿರೀಕ್ಷಾ ಸೂಚಿ(ಜನನ ಕಾಲದಲ್ಲಿ)

ದೇಶ
ಅವಧಿ
ಪುರುಷರು
ವಯಸ್ಸು
ಸ್ತ್ರೀಯರು
(ವಯಸ್ಸು)

1
2
3
4
5
6
7
8
9
10
11
12
13

14
15
16

ಭಾರತ
ಪಾಕಿಸ್ತಾನ
ಜಪಾನ್
ಸಂಯುಕ್ತ ರಾಜ್ಯ
ಐರ್ಲೆಂಡ್
ನಾರ್ವೆ
ಸ್ವೀಡನ್
ಡೆನ್ಮಾರ್ಕ್
ಫ್ರಾನ್ಸ್
ಸ್ವಿಟ್‍ಜóರ್‍ಲೆಂಡ್
ರಷ್ಯ
ಚೆಕೊಸ್ಲೊವಾಕಿಯ
ಅಮೆರಿಕ ಸಂಯುಕ್ತ
ಸಂಸ್ಥಾನಗಳು
ಕೆನಡ
ಆಸ್ಟ್ರೇಲಿಯ
ನ್ಯೂಜಿûೀಲೆಂಡ್
1968
1962
1965
1963-65
1960-62
1956-60
1961-65
1963-64
1964
1959-61
1964-65
1964
1965

1960-62
1960-62
1960-62
53.20
53.72
67.73
68.30
68.13
71.32
71.60
70.30
68.00
69.50
66.00
67.765
66.80

68.35
67.92
68.44
51.90
48.80
72.95
74.40
71.86
75.90
75.70
74.60
75.10
74.80
74.00
73.56
73.70

74.17
74.18
73.75

[ಆಧಾರ : ಭಾರತದ ಅಂಕೆ ಅಂಶಗಳನ್ನುಳಿದು ಮಿಕ್ಕದ್ದು ಯು.ಎನ್.
ಡೆಮಾಗ್ರಾಫಿಕ್ ಬುಕ್, 1966]
(ಆರ್.ಎಸ್.ವಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ